ಬದಲಾವಣೆ ನಿಮ್ಮಿಂದಾಗಲಿ...ಇಲ್ಲಿಂದಲೇ ಆಗಲೀ : ಸ್ವಾಭಿಮಾನಿ ಬಳಗ
ಅನ್ನದಾತರಿಗಾಗಿ
ಭಾರತ ದೇಶದ ಬೆನ್ನೆಲುಬು "ಅನ್ನದಾತ ರೈತ" ರೈತರು ನಾವು ನಮ್ಮ ಕುಟುಂಬಕ್ಕೆ ಮಾತ್ರ ಬೆಳೆಯುತ್ತೇವೆ. ಅಂತ "ಧರಣಿ" ಮಾಡಿದರೆ.. ಆತ ಸ್ವಾರ್ಥಿಯಲ್ಲ.. ಎಲ್ಲರ ಹೊಟ್ಟೆಯನ್ನು ತುಂಬಿಸುವ ರೈತರ ಸರ್ಕಾರಗಳು ಜೀವ ಹಿಂಡುತ್ತಿವೆ. ಬಿತ್ತನೆಬೀಜ, ರಸಗೊಬ್ಬರಗಳ ಬೆಲೆ ಏರಿಕೆ, ಬೆಳೆದ ಬೆಳೆಗೆ ಸೂಕ್ತ ಬೆಲೆಗಳಿಲ್ಲ, ಅತಿವೃಷ್ಟಿ- ಅನಾವೃಷ್ಟಿ ನಷ್ಟ ಅನುಭವಿಸುತ್ತಿರುವ ರೈತರ ಜೊತೆ ನಾವಿದ್ದೇವೆ.
ವಿದ್ಯಾರ್ಥಿಗಳಿಗಾಗಿ
ಮಕ್ಕಳಿಗೆ ಆಸ್ತಿ ಮಾಡಬೇಡಿ "ಅವರಿಗೆ ಉತ್ತಮ ಶಿಕ್ಷಣ ನೀಡಿ" ಅವರ ಸುಸಂಸ್ಕೃತರಾಗಿ ಅವರ ಜೀವನವನ್ನು ಅವರೇ ಕಟ್ಟಿಕೊಂಡು ಬೇರೆಯವರಿಗೂ ಮಾರ್ಗದರ್ಶಕರಾಗುತ್ತಾರೆ.
ಸಮಾಜಕ್ಕಾಗಿ
ಪ್ರಕೃತಿ ಭೂಮಿಯ ಮೇಲೆ ಜೀವಿಸುತ್ತಿರುವವರಿಗೆ ಗಾಳಿ- ನೀರು - ಆಹಾರವನ್ನು ನೀಡುತ್ತಾ ತನ್ನ ಕರ್ತವ್ಯ ನಿರ್ವಹಿಸುತ್ತಿದೆ. ಈ ಭೂಮಿಯ ಮೇಲೆ ಜನಿಸಿರುವ ನಾವು ಯಾವುದಾದರೂ ಒಳ್ಳೆಯ ಕಾರ್ಯಗಳನ್ನು ಮಾಡಬೇಕಲ್ಲವೇ ? ಭಾರತ ದೇಶದ ಉತ್ತಮ ಸಂವಿಧಾನವನ್ನು ನಾವು 76 ವರ್ಷಗಳಾದರೂ ಅರಿತುಕೊಂಡಿಲ್ಲ.. ನಮ್ಮ ಹಕ್ಕುಗಳ ಬಗ್ಗೆ ನಮಗೆ ಅರಿವೇಯಿಲ್ಲದಂತೆ, ರಾಜಕಾರಣಿಗಳ ಸೇವಕರಂತೆ ವರ್ತಿಸುತ್ತಿದ್ದೇವೆ.. ಬದಲಾವಣೆ ನಿಮ್ಮಿಂದ ಸಾಧ್ಯ
ನಮ್ಮೊಂದಿಗೆ ನೀವು - ನಿಮ್ಮೊಂದಿಗೆ ನಾವು
ರಾಷ್ಟ್ರೀಯ ಪಕ್ಷದ ಟಿಕೆಟ್ ಸಿಗದೇಯಿದ್ದಾಗ, ನಾನು ದಾವಣಗೆರೆ ಲೋಕಸಭಾ ಕ್ಷೇತ್ರದ ಮತದಾರರನ್ನು ಭೇಟಿಯಾಗಿ ಅವರ ಅಭಿಪ್ರಾಯಗಳನ್ನು ಕೇಳಿ, ಅವರ ಅಭಿಪ್ರಾಯಗಳಿಗೆ ಮನ್ನಣೆ ನೀಡಿ ಸ್ವಾಭಿಮಾನಿಯಾಗಿ "ಪಕ್ಷೇತರ ಅಭ್ಯರ್ಥಿ" ಯಾಗಿ ಸ್ಪರ್ಧೆ ಮಾಡಿದೆ. ನನ್ನನ್ನು ಸೋಲಿಸಲು ರಾಜ್ಯದ ಮುಖ್ಯಮಂತ್ರಿಗಳು ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ 4 ಸಮಾವೇಶಗಳನ್ನು ಮಾಡಿ "ವಿನಯಕುಮಾರಗೆ ಒಂದೇ ಒಂದು ಓಟ್ ಹಾಕಬಾರದು.. ನಾನು ಬೇಕೋ.. ವಿನಯ್ ಬೇಕೋ ಅನ್ನೋ ಮಾತನ್ನು ಹೇಳುತ್ತಾ, ಹೊನ್ನಾಳಿಯಲ್ಲಿ .... ಜಾತಿಯವನು ನಿಂತಿದ್ದಾನೆ ಅವನಿಗೆ ಓಟ್ ಹಾಕ್ತೀರಾ ? ಹಾಕಬಾರದೆಂಬ ಫರ್ಮಾನು ಹೊರಡಿಸಿ, ಆಡಳಿತ ಯಂತ್ರವನ್ನು ಬಳಸಿಕೊಂಡು ಚುನಾವಣೆಯ ಹಿಂದಿನ ದಿನ ಮನೆಯ ಮೇಲೆ ರೈಡ್ ಮಾಡಿಸಲಾಗುತ್ತೆ. ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಹಿಂದೆಂದೂ ಕಾಣದ, ಕೇಳರಿಯದ ರೀತಿಯಲ್ಲಿ " ಒಂದು ಓಟಿಗೆ 1000 ದಿಂದ 4000 ಸಾವಿರದವರೆವಿಗೂ ಹಂಚಿ, ಓಟುಗಳನ್ನು ಪಡೆದಿರುವುದನ್ನು ನೋಡಿದ್ದೇವೆ" ವಿನಯಕುಮಾರ್ ನನ್ನು ಸೋಲಿಸಲೇಬೇಕೆಂಬ ಗುರಿಯೊಂದಿಗೆ ಹೆಣೆದ ತಂತ್ರಗಳನ್ನು ಮೆಟ್ಟಿನಿಂತು "ನಿಮ್ಮ ವಿನಯಕುಮಾರನಿಗೆ 42907 ಮತಗಳನ್ಬು ನೀಡಿರುವ ನನ್ನೆಲ್ಲಾ ಸ್ವಾಭಿಮಾನಿ ಮತದಾರರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತಾ, ಎಂದಿಗೂ ನಿಮ್ಮೊಂದಿಗೆ ನಾನಿರುತ್ತೇನೆ... ನನ್ನೊಂದಿಗೆ ನೀವಿದ್ದೀರಿ.. ಮುಂದೊಂದು ದಿನ ನಮ್ಮ ಗುರಿಯನ್ನು ತಲುಪುತ್ತೇನೆ ಎಂಬ ವಿಶ್ವಾಸ ನನಗಿದೆ" ನಿಮ್ಮ ಮನೆಯ ಮಗ : ಸ್ವಾಭಿಮಾನಿ ವಿನಯಕುಮಾರ್
ದಾವಣಗೆರೆಯಲ್ಲಿ ಇನ್ಸೈಟ್ಸ್ ಐ.ಎ.ಎಸ್. ಆಕಾಡೆಮಿ
ಕರ್ಮಭೂಮಿ ದಾವಣಗೆರೆ ಜಿಲ್ಲೆಯಲ್ಲಿನ ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕಾಗಿ, ನಗರದಲ್ಲಿ ಐ.ಎ.ಎಸ್. ಕೆ.ಎ.ಎಸ್. ಸ್ಪರ್ಧಾತ್ಮಕ ಪರೀಕ್ಷೆಗಳು, ನವೋದಯ ಶಾಲೆ ಪರೀಕ್ಷೆಗಳಿಗೆ ಕೋಚಿಂಗ್ ತರಬೇತಿ ಕೇಂದ್ರವು ಪ್ರಾರಂಭಿಸಲಾಗುತ್ತಿದೆ.
ವಿದ್ಯಾವಂತರ ಜೊತೆಗೆ ಬೇರೆಯವರೂ ಸಹ ನಾನು ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಬೇಕು. ನಾನು ನಾಯಕನಾಗಬೇಕು ಎಂಬ ಗುರಿಯನ್ನಿಟ್ಟುಕೊಂಡವರಿಗಾಗಿ “ನೀವೂ ನಾಯಕರಾಗಿ” ಎಂಬ ನಾಯಕತ್ವ ಕಾರ್ಯಾಗಾರಗಳನ್ನು ಆಯೋಜಿಸಲಾಗುತ್ತಿದೆ.
ನಿಮ್ಮೊಳಗೆ ಒಬ್ಬ ಸಾಧಕನಿರುತ್ತಾನೆ. ಹಠವಾದಿಯಿರುತ್ತಾನೆ. ಸಾಧಿಸುವ ಛಲವಂತನಿರುತ್ತಾನೆ. ನಿಮ್ಮೊಳಗೆ “ಅಗಾಧವಾದ ಜ್ಞಾನ, ಯುಕ್ತಿ ಮತ್ತು ಶಕ್ತಿಯಿರುತ್ತದೆ” ಅದನ್ನು ಸಾಧನೆಯ ಮೂಲಕ ಹೊರ ಜಗತ್ತಿನ ಮುಂದಿಡಿ ಜೀವನ ಸಾರ್ಥಕವೆನ್ನಿಸಿಕೊಳ್ಳುತ್ತದೆ.
ಒಳ್ಳೇಯದ್ದನ್ನು ಕಲಿಯಿರಿ ಅದರಿಂದ ಒಳಿತಾಗುವುದಕ್ಕೆ ಬಳಸಿಕೊಳ್ಳಿ. ನೀವು ಕಲಿತದ್ದು ಬೇರೆಯವರಿಗೂ ಕಲಿಸಿಕೊಡಿ. ಒಬ್ಬರಿಂದ ಮತ್ತೊಬ್ಬರಿಗೆ ಕಲಿಸಿ ಅವರ ಯಶಸ್ಸಿನಲ್ಲಿ ನೀವೂ ಸಹ ಭಾಗಿಗಳಾಗುವುದೇ ನಿಜವಾದ “ಸಾರ್ಥಕ ಜೀವನ”
ನಿಮ್ಮ ಸ್ಪಂದನೆ
ನ್ಯಾಮತಿ ತಾಲ್ಲೂಕು ಸರ್ಕಾರಿ ಶಾಲೆಗಳ ಕಡೆ, ಯಶಸ್ವಿ ಅಭಿಯಾನ; ಸ್ವಾಭಿಮಾನಿ ಬಳಗ
ನಮ್ಮ ನಡೆ ಸರ್ಕಾರಿ ಶಾಲೆಗಳ ಕಡೆಗೆ ಅಭಿಯಾನವು ಇಂದು ನ್ಯಾಮತಿ ತಾಲ್ಲೂಕಿನ ಸೂರಗೊಂಡನಕೊಪ್ಪ, ಹಳೆ ಜೋಗ, ಹೊಸ ಜೋಗ, ಚಿನ್ನಿಕಟ್ಟೆ, ಮಾದಾಪುರ, ಕೊಡತಾಳು, ಸವಳಂಗ ಗ್ರಾಮಗಳ ಕಿರಿಯ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆ ಪ್ರೌಡ ಶಾಲೆಗಳಿಗೆ ಸ್ವಾಭಿಮಾನಿ ಬಳಗದ ತಂಡವು
ಪ್ರಬಂಧ ಬರೆಯಿರಿ 20 ಸಾವಿರ ಬಹುಮಾನ ಗೆಲ್ಲಿರಿ: ಸ್ವಾಭಿಮಾನಿ ಬಳಗ
ಕುಟುಂಬ ರಾಜಕಾರಣ ಪ್ರಜಾಪ್ರಭುತ್ವ ಹಾಗೂ ಅಭಿವೃದ್ಧಿಗೆ ಮಾರಕವೇ? ಸ್ವಾಭಿಮಾನಿ ವಿನಯ್ ಕುಮಾರ್ ರವರ ಶೈಕ್ಷಣಿಕ, ಆರ್ಥಿಕ, ಔದ್ಯೋಗಿಕ & ರಾಜಕೀಯ ಕ್ಷೇತ್ರಗಳಲ್ಲಿ ಅವಕಾಶ ವಂಚಿತ ಹಾಗೂ ಶೋಷಿತರು ಮುಖ್ಯವಾಹಿನಿಗೆ ತರುವಲ್ಲಿ ಸ್ವಾಭಿಮಾನಿ ಬಳಗ ದಿಟ್ಟ ಹೆಜ್ಜೆಗಳನ್ನು ಇಡುತ್ತಿದೆ. ಮೊದಲ ಹಂತವಾಗಿ ದಾವಣಗೆರೆ
“ಕುಟುಂಬ ರಾಜಕಾರಣ ಪ್ರಜಾಪ್ರಭುತ್ವ ಹಾಗೂ ಅಭಿವೃದ್ಧಿಗೆ ಮಾರಕವೇ” ಪ್ರಬಂಧ ಸ್ಪರ್ಧೆ : ಸ್ವಾಭಿಮಾನಿ ಬಳಗ
ಸ್ವಾಭಿಮಾನಿ ಬಳಗವು ದಾವಣಗೆರೆ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ “ಕುಟುಂಬ ರಾಜಕಾರಣ ಪ್ರಜಾಪ್ರಭುತ್ವಕ್ಕೆ ಹಾಗೂ ಅಭಿವೃದ್ದಿಗೆ ಮಾರಕ” ಎಂಬ ವಿಷಯದ ಕುರಿತು ಪ್ರಬಂಧ ಸ್ಪರ್ಧೆ ಏರ್ಪಡಿಸಿದೆ. ಡಿಸೆಂಬರ್ 20ರೊಳಗೆ ಸಲ್ಲಿಸಬೇಕು ಎಂದು ಬಳಗದ ಸಂಸ್ಥಾಪಕ ರಾಜ್ಯಾಧ್ಯಕ್ಷ ಜಿ. ಬಿ.
ಸ್ವಾಭಿಮಾನಿ ಬಳಗದ ಉದ್ಘಾಟನೆ, ವೆಬ್‌ಸೈಟ್ ಲೋಕಾರ್ಪಣೆ, ಮಹಾನ್ ಪುರುಷರ ಜಯಂತಿ ಮತ್ತು ಗೌರವ ಪುರಸ್ಕಾರ : ವಿನಯ್‌ಕುಮಾರ್
ದಿನಾಂಕ 17-11-2024 ರ ಭಾನುವಾರದಂದು ಬೆಳಿಗ್ಗೆ 11-00 ಗಂಟೆಗೆ ಸ್ವಾಭಿಮಾನಿ ಬಳಗದ ಉದ್ಘಾಟನೆಯನ್ನು ಹಮ್ಮಿಕೊಳ್ಳಲಾಗಿದೆ. ಜೊತೆಗೆ ಸಾಧಕರಿಗೆ ಗೌರವ ಸನ್ಮಾನ, ಶ್ರೀ ವಾಲ್ಮೀಕಿ ಜಯಂತಿ, ಶ್ರೀ ಒನಕೆ ಓಬವ್ವ ಜಯಂತಿ ಹಾಗೂ ಶ್ರೀ ಕನಕದಾಸರ ಜಯಂತಿಯ ಆಚರಣೆಯೊಂದಿಗೆ ಸ್ವಾಭಿಮಾನಿ ಬಳಗದ ವೆಬ್‌ಸೈಟನ್ನು
“ಸಂಗೊಳ್ಳಿ ರಾಯಣ್ಣ ಎಕ್ಸ್ಪ್ರೆಸ್” ರೈಲ್ವೆ ಸಚಿವ ವಿ. ಸೋಮಣ್ಣಗೆ ಹಾಲುಮತ ಮಹಾಸಭಾ ಮನವಿ
ಬೆಂಗಳೂರು-ಬೆಳಗಾವಿ 20653 ಮತ್ತು ಬೆಳಗಾವಿ-ಬೆಂಗಳೂರು 20654 ಸೂಪರ್ ಫಾಸ್ಟ್ ರೈಲಿಗೆ “ಸಂಗೊಳ್ಳಿ ರಾಯಣ್ಣ ಎಕ್ಸ್ಪ್ರೆಸ್” ಎಂದು ನಾಮಕರಣ ಮಾಡಿ, ದೇಶಭಕ್ತ, ಹುತಾತ್ಮರಿಗೆ ಗೌರವ ಸಲ್ಲಿಸಬೇಕೆಂದು ದಾವಣಗೆರೆಯಲ್ಲಿ ಕೇಂದ್ರ ರೈಲ್ವೆ ಸಚಿವರಾದ ವಿ. ಸೋಮಣ್ಣನವರಿಗೆ ಮನವಿ ಸಲ್ಲಿಸಲಾಯಿತು. ಭಾರತ ದೇಶದ ಸ್ವಾತಂತ್ರ÷್ಯಕ್ಕಾಗಿ,
ರಾಜ್ಯಪಾಲರ ನಡೆ ಖಂಡನೆ : ಅಹಿಂದ ವರ್ಗಗಳು ಸಿಡಿದೇಳುವ ದಿನಗಳು ದೂರವಿಲ್ಲ- ಜಿ. ಬಿ. ವಿನಯ್‌ಕುಮಾರ್
ಕಳಂಕ ರಹಿತ ರಾಜಕಾರಣಿ ಸಿದ್ದರಾಮಯ್ಯನವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ “ರಾಜ್ಯಪಾಲರ ನಡೆಗೆ ಖಂಡನೆ” – ಜಿ. ಬಿ. ವಿನಯ್‌ಕುಮಾರ್ ಕಳಂಕ ರಹಿತ ರಾಜಕಾರಣಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪದಚ್ಯುತಿಗೆ ಮೊದಲ ಹೆಜ್ಜೆಯಾಗಿ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. 2013 ರಿಂದ 2018ರ