ಜಿ.ಬಿ. ವಿನಯ್ಕುಮಾರ್ರ ವಿರುದ್ಧ ಪತ್ರಿಕಾಗೋಷ್ಟಿ ನಡೆಸಿ, ಉಚ್ಚಾಟನೆ ಸಂದೇಶ ನೀಡಿದ್ದ ದಾವಣಗೆರೆ ಜಿಲ್ಲಾ ಕಾಂಗ್ರೇಸ್ ಜಿಲ್ಲಾಧ್ಯಕ್ಷರ ಆರೋಪಗಳಿಗೆ ಪತ್ರಿಕಾಭವನದಲ್ಲಿ ಸುದ್ದಿಗೋಷ್ಟಿ ನಡೆಸಿದ ಜಿ. ಬಿ.ವಿನಯ್ಕುಮಾರ್ರವರು “ನಾನು ಯಾರ ಹಂಗಿನಲ್ಲೂ ಇಲ್ಲ, ಸ್ವಾಭಿಮಾನಿ, ಸ್ವಾವಲಂಭಿಯಾಗಿ ಚುನಾವಣೆ ಎದುರಿಸಿದ್ದೇನೆ. ಫಲಿತಾಂಶದ ನಂತರವೂ ನಿರಂತರವಾಗಿ ಕ್ಷೇತ್ರದಲ್ಲಿ ಜನರೊಂದಿಗಿದ್ದೇನೆAದು,ವ್ಯವಸ್ಥೆಯ ಅವ್ಯವಸ್ಥೆಯನ್ನು ಸರಿಪಡಿಸುವಲ್ಲಿ ನನ್ನ ಹೋರಾಟ ನಿರಂತರವಾಗಿರುತ್ತದೆ. ನಾನು ಚುನಾವಣೆಗಾಗಿ ದಾವಣಗೆರೆಗೆ ಬಂದವನಲ್ಲ.ನನ್ನ ತವರು ದಾವಣಗೆರೆಯ ಕಕ್ಕರಗೊಳ್ಳ, ಅಡ್ಡದಾರಿಯಲ್ಲಿ ಅವಕಾಶ ಪಡೆಯುವ ವ್ಯಕ್ತಿತ್ವ ನನ್ನದ್ದಲ್ಲ. ಹೋರಾಟ ನಡೆಸಿ ಗುರಿಮುಟ್ಟುತ್ತೇನೆ ಎಂದರು.
ಅಹಿಂದ ವರ್ಗಗಳ ಪರವಾಗಿ ಧ್ವನಿ ಎತ್ತಿದ್ದೇ ಅಪರಾಧವಾ ?
ಅಹಿಂದ ವರ್ಗಗಳಿಗೆ ಆಗುತ್ತಿರುವ ಅನ್ಯಾಯಗಳ ಬಗ್ಗೆ ಅಹಿಂದ ವರ್ಗಗಳ ಪ್ರತಿನಿಧಿಯಾಗಿ ಧ್ವನಿ ಎತ್ತಿದ್ದೇನೆ. ಶೋಷಿತ ವರ್ಗಗಳ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರ ಪದಚ್ಯುತಿಗೆ ನಡೆಸುತ್ತಿರುವ ಕುತಂತ್ರಗಳ ಬಗ್ಗೆ ಮಾತನಾಡಿದ್ದೇನೆ. ಇದು ಮಹಾಪರಾಧವೆಂಬAತೆ ದಾವಣಗೆರೆ ಜಿಲ್ಲಾ ಕಾಂಗ್ರೇಸ್ ಪಕ್ಷದ ಜಿಲ್ಲಾಧ್ಯಕ್ಷರು “ಪತ್ರಿಕಾಗೋಷ್ಟಿ” ನಡೆಸಿದ್ದಾರೆ.
ಚುನಾವಣಾ ಸಮಯದಲ್ಲಿ ಜಾತಿ ಸಮಾವೇಶ ಮಾಡಿದ್ದು ವಿನಯ್ಕುಮಾರ್ನಾ ? ಕಾಂಗ್ರೇಸ್ ಪಕ್ಷನಾ ?
ಅಹಿಂದ ವರ್ಗಗಳ ಪರವಾಗಿದ್ದೇವೆ ಎಂದು ಬಿಂಬಿಸಿಕೊಳ್ಳುತ್ತಿರುವ ರಾಷ್ಟಿçÃಯ ಪಕ್ಷ ಕಾಂಗ್ರೇಸ್ ಜಿಲ್ಲಾಧ್ಯಕ್ಷರಾಗಿ, ಅದೇ ವರ್ಗಗಳನ್ನು ಪ್ರತಿನಿಧಿಸುತ್ತಿರುವ ನನ್ನ ವಿರುದ್ಧ ಸುದ್ದಿಗೋಷ್ಟಿಯಲ್ಲಿ “ಏಕವಚನ” ಪ್ರಯೋಗಿಸಿರುವುದು ಶೋಷಿತ ವರ್ಗಗಳ ದುರಾದೃಷ್ಟ ಎನ್ನಬಹುದು. ವಿನಯ್ಕುಮಾರ್ ರವರು ಜಾತಿ, ಜಾತಿಗಳ ನಡುವೆ ದ್ವೇಷವನ್ನು ಹರಡುತ್ತಿದ್ದಾರೆ ಎಂಬ ಮಾತುಗಳನ್ನು ಆಡಿರುವ ಜಿಲ್ಲಾಧ್ಯಕ್ಷರು,
ಲೋಕಸಭಾ ಚುನಾವಣೆಯ ಎರಡು ದಿನಗಳ ಮುಂಚಿತವಾಗಿ “ಪ್ರತ್ಯೇಕವಾಗಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಕುರುಬ ಸಮುದಾಯದ ಸಭೆ”ಯನ್ನು ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಆಯೋಜಿಸಿ, ಈ ನಾಡಿನ ಮುಖ್ಯಮಂತ್ರಿಗಳಿAದ “ಪಕ್ಷೇತರ ಅಭ್ಯರ್ಥಿ ವಿನಯ್ ಕುಮಾರ್ಗೆ ಒಂದೇ ಒಂದು ಓಟ್” ಹಾಕಬಾರದೆಂದು ಹೇಳಿಸಿದ್ದವರು ಯಾರು ? ಹೊನ್ನಾಳಿಯಲ್ಲಿ ನಡೆದ ಬಹುರಂಗ ಸಭೆಯಲ್ಲಿ “ಒಬ್ಬ ಕುರುಬ ಜಾತಿಯ ವ್ಯಕ್ತಿ” ಸ್ಪರ್ಧೆ ಮಾಡಿದ್ದಾನೆ ಅಂತ ಓಟ್ ಹಾಕ್ತೀರಾ ಎಂದು ಹೇಳಿಸಿದವರು ಯಾರು ? ಕಾಂಗ್ರೇಸ್ ಪಕ್ಷದ ಜಿಲ್ಲಾಧ್ಯಕ್ಷರು ಯಾಕೆ ತಡೆಯಲಿಲ್ಲ ?
ಹಣದ ಹೊಳೆಯ ನಡುವೆಯೂ ದಾವಣಗೆರೆ ಲೋಕಸಭಾ ಕ್ಷೇತ್ರದ ಮತದಾರರು ನನ್ನನ್ನು ಗೆಲ್ಲಿಸಿದ್ದಾರೆ :
2024ರ ಲೋಕಸಭೆ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡಿದ್ದಿದ್ದು “ಪಕ್ಷೇತರ”ನಾಗಿ, ನಾನು ಗೆಲ್ಲುವಂತಹ ವಾತಾವರಣವಿದ್ದಾಗ, ನನಗೆ ಟಿಕೆಟ್ ತಪ್ಪಿಸಲು ಹಾಗೂ ನನ್ನ ಮೇಲೆ ಜನರಿಗೆ ತಪ್ಪು ಅಭಿಪ್ರಾಯ ಮೂಡಿಸಲು ಸ್ವಾಮಿಜೀಗಳು ಮತ್ತು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿಸುವಂತೆ ಮಾಡಿ, ಯಾವುದೇ ಮಾತುಕತೆಗೂ ಅವಕಾಶ ನೀಡದ ಸನ್ನಿವೇಶವನ್ನು ಸೃಷ್ಟಿಸಿ, ಮುಖ್ಯಮಂತ್ರಿಗಳು ನನಗೆ ಹಾರ, ಶಾಲು ಹಾಕಿದ್ದನ್ನು ಕ್ಷಣಾರ್ಧದಲ್ಲಿ ಫೋಟೋ ತೆಗೆದು ಮಾಧ್ಯಮಗಳಿಗೆ ಬಿಡುಗಡೆ ಮಾಡಲಾಯಿತು. ಮತದಾರರಿಗೆ ಗೊಂದಲವಾಗಬಾರದೆAಬ ಕಾರಣಕ್ಕೆ “ಬೆಂಗಳೂರಿನಿAದಲೇ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದೆ” ನನ್ನ ಮೇಲೆ ನಂಬಿಕೆಯಿಟ್ಟಿದ್ದ ಮತದಾರ ಸ್ವಾಭಿಮಾನಕ್ಕೆ ಧಕ್ಕೆಯಾಗದಂತೆ “ಪಕ್ಷೇತರ” ನಾಗಿ ಕಣದಲ್ಲಿ ಉಳಿದುಕೊಂಡೆ. 27 ಲೋಕಸಭಾ ಕ್ಷೇತ್ರಗಳಲ್ಲಿ ಹಲವಾರು ಪಕ್ಷೇತರರು ಸ್ಪರ್ಧೆ ಮಾಡಿದ್ದರೂ “ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಗೆಲುವಿನ ನಾಗಾಲೋಟದಲ್ಲಿದ್ದ ನನ್ನ ಸೋಲಿಸಲು ಮುಖ್ಯಮಂತ್ರಿಗಳಿAದ 4 ಸಮಾವೇಶಗಳನ್ನು ಮಾಡಿಸುತ್ತಾರೆ. ಒಂದೇ ಒಂದು ಓಟ್ ವಿನಯ್ ಕುಮಾರ್ ಗೆ ಹಾಕಬಾರದೆಂದು ಬಹಿರಂಗ ಸಭೆಯಲ್ಲಿ ಹೇಳುತ್ತಾರೆ. ನನಗೆ ಓಟ್ ಹಾಕಿದರೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಓಟ್ ಹಾಕಿದಂತೆ ಎಂದು ಘೋಷಣೆ ಮಾಡಿ, ಪ್ರಾಮಾಣಿಕವಾಗಿ ಸ್ಪರ್ಧೆಯಲ್ಲಿದ್ದ ನನ್ನ ಸೋಲಿಸಲು ಏನೆಲ್ಲಾ ಮಾಡಲಾಯಿತು. ನನ್ನ ಮನೆಯ ಮೇಲೆ ಚುನಾವಣಾ ಆಯೋಗದವರು ದಾಳಿ ನಡೆಸಿದರು. ನನ್ನನ್ನು ಬೆಂಬಲಿಸುತ್ತಿದ್ದವರನ್ನು ದೂರ ಸರಿಯುವಂತೆ ಮಾಡಲಾಯಿತು, ದಾವಣಗೆರೆ ಲೋಕಸಭಾ ಚುನಾವಣಾ ಇತಿಹಾಸದಲ್ಲಿ ರಾಷ್ಟಿçÃಯ ಪಕ್ಷಗಳು ನೂರಾರು ಕೋಟಿ ಹಣ ಖರ್ಚು ಮಾಡಿದ್ದು, ಸ್ವಾಭಿಮಾನಿ ವಿನಯಕುಮಾರ್ ಸ್ಪರ್ಧೆಯಿಂದಲೇ ಅಲ್ಲವಾ ? ಆದರೂ ಸಹ ಜನರ ಅಭಿಪ್ರಾಯದಂತೆ ಚುನಾವಣೆ ಎದುರಿಸಿ, ಮತದಾರರಿಗೆ ಅಮಿಷ ಒಡ್ಡದೇ ಸ್ವಾಭಿಮಾನಿ ಮತದಾರರಿಂದ 42907 ಮತಗಳನ್ನು ಗಳಿಸಿದ್ದೇನೆ. ಚುನಾವಣೆಯಲ್ಲಿ ನಾನು ಸಹ ಅಮಿಷಗಳನ್ನು ಒಡ್ಡಿದ್ದಿದ್ದರೆ “ರಾಜಕೀಯ” ಮಾಡಿದ್ದಿದ್ದರೆ ಲಕ್ಷಕ್ಕಿಂತ ಹೆಚ್ಚುವರಿ ಮತಗಳನ್ನು ಗಳಿಸುವುದು ಕಷ್ಟವಾಗುತ್ತಿರಲಿಲ್ಲ. ಆಗ ಚುನಾವಣಾ ಫಲಿತಾಂಶ ಏನಾಗಿರುತ್ತಿತ್ತು ?
ಅಹಿಂದ ವರ್ಗದ ಕಾಂಗ್ರೇಸ್ ಜಿಲ್ಲಾಧ್ಯಕ್ಷರಿಗೆ ಹೊನ್ನಾಳಿ ವಿಧಾನಸಭೆ ಟಿಕೆಟ್, ಲೋಕಸಭಾ ಟಿಕೆಟ್ ಕೊಡಬೇಕಿತ್ತು
ಅಹಿಂದ ವರ್ಗಗಳ ಪರವಾಗಿ ಪ್ರೀತಿ ವಿಶ್ವಾಸವಿದ್ದಿದ್ದರೆ 2019ರಲ್ಲಿ ಕೊನೆಯ 13 ದಿನಗಳಲ್ಲಿ ಹಿಂದುಳಿದ ವರ್ಗಗಳ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಶ್ರೀ ಹೆಚ್. ಬಿ. ಮಂಜಪ್ಪನವರಿಗೆ ಟಿಕೆಟ್ ಕೊಟ್ಟಿದ್ದರಲ್ಲ ಹಾಗೆಯೇ 2024 ರಲ್ಲೂ ಕೊಡಿಸಬಹುದಿತ್ತು. ಜಿಲ್ಲೆಯಲ್ಲಿ ಕಾಂಗ್ರೇಸ್ ಶಾಸಕರುಗಳು ಇಲ್ಲದೇ ಇದ್ದಾಗ, ಗೆಲ್ಲುವ ವಾತಾವರಣ ಇಲ್ಲದೇ ಇರುವಾಗ ಅಹಿಂದ ವರ್ಗದವರಿಗೆ ಟಿಕೆಟ್ ನೀಡಿದ್ದಾರೆ, 2024ರಲ್ಲಿ ಗೆಲ್ಲುವ ವಾತಾವರಣವಿದ್ದಾಗ, ಟಿಕೆಟ್ ತಪ್ಪಿಸಲಾಗುತ್ತದೆ. ಹಿಂದೊಮ್ಮೆ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಿಂದ ಶ್ರೀ ಸೈಯದ್ ಸೈಫುಲ್ಲಾ ಅವರ ನಾಮಪತ್ರ ತಿರಸ್ಕೃತÀಗೊಂಡಿದ್ದಾದರೂ ಯಾಕೆ ? ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರ ಮತಗಳ ಸಹಕಾರದೊಂದಿಗೆ ಗೆಲ್ಲುತ್ತಿರುವವರು “ಒಮ್ಮೆಯಾದ್ರೂ ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಡಿಸಿದ್ದಾರಾ” ಹೊನ್ನಾಳಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೇಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದ ಶ್ರೀ ಹೆಚ್.ಬಿ. ಮಂಜಪ್ಪನವರಿಗೆ ಟಿಕೆಟ್ ಯಾಕೆ ಕೊಡಿಸಲಿಲ್ಲ? ಸರ್ಕಾರ ಬಂದು ಒಂದೂವರೆ ವರ್ಷಗಳಾದ್ರೂ ನಿಗಮ ಮಂಡಳಿಯಲ್ಲಿ ಅಧ್ಯಕ್ಷ ಸ್ಥಾನ ನೀಡಲಾಗಿದೆಯಾ ? ಎಷ್ಟು ಜನ ಅಹಿಂದ ವರ್ಗದವರಿಗೆ ನಿಗಮ ಮಂಡಳಿಯಲ್ಲಿ ಅವಕಾಶ ನೀಡಲಾಗಿದೆ ? 80% ರಷ್ಟಿರುವ ಅಹಿಂದ ವರ್ಗಗಳ ಮತಗಳನ್ನು ಪಡೆಯುವವರು “ದೂಡಾ ಅಧ್ಯಕ್ಷರನ್ನಾಗಿ” ಮಾಡಿದ್ದಾರಾ ? ನಾಮಕಾವಸ್ಥೆ ನಾಮನಿರ್ದೇಶಕರುಗಳನ್ನಾಗಿಸಿ, ಅಹಿಂದ ವರ್ಗಗಳು ಓಟ್ ಹಾಕಲು ಮಾತ್ರ ಎಂಬುದನ್ನು ತೋರಿಸುತ್ತಿದ್ದಾರೆ.
ರಾಜ್ಯಾದ್ಯಂತ ಶೋಷಿತ “ಅಹಿಂದ” ವರ್ಗಗಳ ಜಾಗೃತಿ ಮತ್ತು ಸಂಘಟನೆ :
ಅಹಿಂದ ವರ್ಗಗಳ ಮುಖ್ಯಮಂತ್ರಿಗೆ ಅನ್ಯಾಯವಾಗುತ್ತಿದೆ ಎನ್ನುವಾಗ ನಾನು ಧ್ವನಿ ಎತ್ತಿದ್ದೇನೆ ಹಾಗೆಯೇ ದಾವಣಗೆರೆ ಜಿಲ್ಲೆಯಲ್ಲಿ ಅಹಿಂದ ವರ್ಗಗಳ ನಾಯಕರುಗಳು ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ ಎನ್ನುವಾಗಲೂ ಧ್ವನಿ ಎತ್ತುತ್ತೇನೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜನಸಂಖ್ಯೆಯಲ್ಲಿ 80%ರಷ್ಟಿರುವ ಅಹಿಂದ ವರ್ಗಗಳಿಂದ ಅತಿ ಹೆಚ್ಚು ಶಾಸಕರಾಗಿ ಆಯ್ಕೆಯಾಗಲು “ಶೋಷಿತರ ಶಕ್ತಿಯನ್ನು” ಮನದಟ್ಟು ಮಾಡಲು ರಾಜ್ಯಾದ್ಯಂತ “ಶೋಷಿತರ ಅಹಿಂದ ವರ್ಗಗಳ ಜಾಗೃತಿ ಮತ್ತು ಸಂಘಟನೆ” ಮಾಡುತ್ತಿದ್ದೇನೆ. ಧ್ವನಿಯಿಲ್ಲದವರ ಧ್ವನಿಯಾಗಿ ಅವರ ಹಕ್ಕುಗಳನ್ನು ಪಡೆಯಲು ಅವರೊಂದಿಗಿರುತ್ತೇನೆ.
ವಿನಯ್ಕುಮಾರ್ ಯಾರ ಹಂಗಿನಲ್ಲೂ ಇಲ್ಲ “ಸ್ವಾಭಿಮಾನಿ ಮತ್ತು ಸ್ವಾವಲಂಭಿ”
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಟಿಕೆಟ್ಗಾಗಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಕೆ.ಪಿಸಿ.ಸಿ. ಅಧ್ಯಕ್ಷರಾದ ಮಾನ್ಯ ಡಿ. ಕೆ. ಶಿವಕುಮಾರ್ರವರು ಸೇರಿದಂತೆ ಕೆ.ಪಿ.ಸಿ.ಸಿ. ಮತ್ತು ಎ.ಐಸಿ.ಸಿ. ಮುಖಂಡರಲ್ಲಿ ಮನವಿ ಮಾಡಿದ್ದೆ. ಚಿತ್ರದುಗದಲ್ಲಿ ನಡೆದ “ಶೋಷಿತರ ಸಮಾವೇಶ”ಕ್ಕೆ ಲೋಕಸಭಾ ಕ್ಷೇತ್ರದಿಂದ ನೂರಾರು ವಾಹನಗಳ ಮೇಲೆ ಹಾಕಲಾಗಿದ್ದ ಫ್ಲೆಕ್ಸ್ಗಳಲ್ಲಿ ಕಾಂಗ್ರೇಸ್ ಪಕ್ಷದ ಚಿಹ್ನೆ, ಮುಖಂಡರ ಭಾವಚಿತ್ರದೊಂದಿಗೆ “ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ವಿನಯಕುಮಾರ್” ಫೋಟೋವೂ ಇತ್ತು. ಆಗೆಲ್ಲಾ ಇಲ್ಲದಿದ್ದ ವಿರೋಧ ಈಗ ಯಾಕೆ ? ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರಲಿಲ್ಲ.”ಕ್ರಮ ಸಂಖ್ಯೆ 28, ಪಕ್ಷೇತರನಾಗಿ ಸಿಲಿಂಡರ್ ಗುರುತಿನಲ್ಲಿ” ಸ್ಪರ್ಧೆ ಮಾಡಿದ್ದೆ.
ಜಿ. ಬಿ. ವಿನಯಕುಮಾರ್ ಯಾರ ಹಂಗಿನಲ್ಲೂ ಇಲ್ಲ ಸ್ವಾಭಿಮಾನಿಯಾಗಿ, ಸ್ವತಂತ್ರವಾಗಿದ್ದೇನೆ. ದಾವಣಗೆರೆ ಜಿಲ್ಲೆಯಲ್ಲಿ ಬಡ, ಮಧ್ಯಮ ವರ್ಗಗಳ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲು ತರಬೇತಿ ಕೇಂದ್ರಗಳನ್ನು ಪ್ರಾರಂಭಿಸುತ್ತಿದ್ದೇನೆ. ದಾವಣಗೆರೆ ಜಿಲ್ಲೆ ಸೇರಿದಂತೆ ರಾಜ್ಯದಾದ್ಯಂತ “ನಮ್ಮ ನಡೆ ಸರ್ಕಾರಿ ಶಾಲೆಗಳ ಕಡೆಗೆ” “ಸರ್ಕಾರಿ ಶಾಲೆಗಳನ್ನು ಉಳಿಸಿ ಅಭಿಯಾನ”ವನ್ನು ಪ್ರಾರಂಭಿಸುತ್ತಿದ್ದೇನೆ. ರಾಜಕೀಯ ಕ್ಷೇತ್ರದಲ್ಲಿ ನನಗಾದ ಅನ್ಯಾಯ, ಎದುರಿಸಿದ “ಕುತಂತ್ರಗಳು” ಬೇರೆ ಯಾರೂ ಅನುಭವಿಸಬಾರದೆಂಬ ಕಾರಣಕ್ಕೆ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇನೆ. ಅಹಿಂದ ವರ್ಗಗಳ ಜಾಗೃತಿಗಾಗಿ “ರಾಜ್ಯಮಟ್ಟದ ಅಹಿಂದ ಸಮಾವೇಶ”ವನ್ನು ಆಯೋಜಿಸಲಾಗುತ್ತಿದೆ.
ನನ್ನ ತವರು ದಾವಣಗೆರೆ ಜಿಲ್ಲೆಯ “ಕಕ್ಕರಗೊಳ್ಳ” ಗ್ರಾಮ, ನಾನು ಚುನಾವಣೆಗಾಗಿ ವಲಸೆ ಬಂದಿಲ್ಲ. ಸಾಧಿಸಲು ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟಿದ್ದೇನೆ. ಕಾಂಗ್ರೇಸ್ ಪಕ್ಷದ ಜಿಲ್ಲಾಧ್ಯಕ್ಷರು ಒಂದು ಕುಟುಂಬದ ಪರವಾಗಿ ಮಾತನಾಡುತ್ತಿದ್ದಾರೆ. ವಿನಯ್ಕುಮಾರ್ ಸಮಸ್ತ ಶೋಷಿತ ವರ್ಗಗಳ ಪರವಾಗಿ ಮಾತನಾಡುತ್ತಿದ್ದಾನೆ. ಈ ಸತ್ಯವನ್ನು ಜನರು ಅರಿತುಕೊಂಡಿದ್ದಾರೆ ಎಂದರು.