ಕಳಂಕ ರಹಿತ ರಾಜಕಾರಣಿ ಸಿದ್ದರಾಮಯ್ಯನವರ ವಿರುದ್ಧ ಪ್ರಾಸಿಕ್ಯೂಷನ್ಗೆ
ಅನುಮತಿ ನೀಡಿದ “ರಾಜ್ಯಪಾಲರ ನಡೆಗೆ ಖಂಡನೆ” – ಜಿ. ಬಿ. ವಿನಯ್ಕುಮಾರ್
ಕಳಂಕ ರಹಿತ ರಾಜಕಾರಣಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪದಚ್ಯುತಿಗೆ ಮೊದಲ ಹೆಜ್ಜೆಯಾಗಿ ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ
ಅನುಮತಿ ನೀಡಿದ್ದಾರೆ. 2013 ರಿಂದ 2018ರ 5 ವರ್ಷಗಳ ಅವಧಿಯಲ್ಲಿ ಸಿದ್ದರಾಮಯ್ಯನವರ ತಪ್ಪುಗಳನ್ನು ಕಂಡು ಹಿಡಿಯಲು
ಪ್ರಯತ್ನಪಟ್ಟು “ವಾಚ್ ವಿಷಯವನ್ನು ದೊಡ್ಡದು ಮಾಡಿದ್ದರು” ಕಾಯಕವೇ ಕೈಲಾಸವೆಂದ ಬಸವಣ್ಣನವರ ಭಾವಚಿತ್ರವನ್ನು ಸರ್ಕಾರಿ ಇಲಾಖೆಗಳಲ್ಲಿ ಅಳವಡಿಸುವ ಸರ್ಕಾರಿ ಆದೇಶ ಮಾಡಿದ್ದ ಸಿದ್ದರಾಮಯ್ಯನವರಿಗೆ “ವೀರಶೈವ ಲಿಂಗಾಯತ” ಸಮುದಾಯದವರು ಬೆಂಗಳೂರಿನ ಅರಮನೆ ಮೈದಾನದಲ್ಲಿ ‘ಅಭಿನಂದನಾ ಕಾರ್ಯಕ್ರಮ”ದಲ್ಲಿ “ಲಿಂಗಾಯತ ಧರ್ಮ”ದ ಬೇಡಿಕೆ ಮನವಿ ಪತ್ರ ಸಲ್ಲಿಸಿದ್ದರು. ಆ ಮನವಿಗೆ ಸ್ಪಂದಿಸಿ, “ಸಮಿತಿ ರಚಿಸಿದ್ದರು” ಇದರಲ್ಲಿ ಸಿದ್ದರಾಮಯ್ಯನವರ ಯಾವುದೇ ತಪ್ಪಿಲ್ಲದಿದ್ದರೂ ಸಹ 2018ರ ವಿಧಾನಸಭಾ ಚುನಾವಣೆಯಲ್ಲಿ “ಲಿಂಗಾಯತ ವಿರೋಧಿ” ಎಂಬAತೆ ಬಿಂಬಿಸಿ, ಮತ್ತೊಮ್ಮೆ ಮುಖ್ಯಮಂತ್ರಿಯಾಗುವುದನ್ನು ತಪ್ಪಿಸಿದ್ದರು.
ಅಹಿಂದ ವರ್ಗಗಳಿಂದ ಮುಖ್ಯಮಂತ್ರಿಗಳಾಗಿದ್ದ ಎಸ್. ಬಂಗಾರಪ್ಪನವರು, ವೀರಪ್ಪ ಮೊಯಿಲಿಯವರನ್ನು ಎರೆಡೆರೆಡು ವರ್ಷಗಳಿಗೆ ಪದಚ್ಯುತಿಗೊಳಿಸಿದ್ದರು. ಅದೇ ತಂತ್ರವನ್ನು ಸಿದ್ದರಾಮಯ್ಯನವರ ಆಡಳಿತದಲ್ಲಿ 5 ವರ್ಷಗಳಲ್ಲಿ ಮಾಡಲು ಹೋಗಿ ವಿಫಲರಾಗಿದ್ದರು. 2023ರಲ್ಲಿ ಬಹುಮತದೊಂದಿಗೆ ಮತ್ತೊಮ್ಮೆ ಮುಖ್ಯಮಂತ್ರಿಯಾಗಿದ್ದನ್ನು ಸಹಿಸಲಾರದೇ ಒಂದು ವರ್ಷದಿಂದ ಬಿಜೆಪಿ ಮತ್ತು ಜೆಡಿಎಸ್ನವರು ಶತಾಯ ಗತಾಯ ಮುಖ್ಯಮಂತ್ರಿಗಳ ಜನಪ್ರಿಯತೆ ಕುಗ್ಗಿಸಲು ಕಸರತ್ತು ನಡೆಸುತ್ತಾ ಆರಂಭಿಕ ಯಶಸ್ಸನ್ನು ಪಡೆದಿದ್ದಾರೆ.
ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತನ್ನ ಅಧಿಕಾರವನ್ನು ಬಳಸಿಲ್ಲ. ಮುಡಾ ಅಧಿಕಾರಿಗಳ ತಪ್ಪು ಸ್ಪಷ್ಟವಾಗಿ ಕಾಣಿಸುತ್ತಿದೆಯಾದರೂ ವಿಜಯನಗರ ಬಡಾವಣೆಯಲ್ಲಿ ಸಿದ್ದರಾಮಯ್ಯನವರ ಧರ್ಮಪತ್ನಿ ಶ್ರೀಮತಿ ಪಾರ್ವತಮ್ಮನವರಿಗೆ 14 ನಿವೇಶನಗಳನ್ನು ಮಂಜೂರು ಮಾಡಿದ್ದ ಭಾರತೀಯ ಜನತಾ ಪಕ್ಷದ ನೇತೃತ್ವದ ಸರ್ಕಾರ. ತನಿಖೆಗೆ ಒಳಡಿಸಬೇಕಾದುದ್ದು ತಪ್ಪಿತಸ್ಥ ಅಧಿಕಾರಿಗಳನ್ನು ಹೊರತು ಸಿದ್ದರಾಮಯ್ಯನವರನಲ್ಲ.ಇಷ್ಟು ವರ್ಷಗಳು ಇಲ್ಲದೇ ಇದ್ದದ್ದು ಈಗ ಯಾಕೆ ಮೂವರಿಂದ “ರಾಜ್ಯಪಾಲರಿಗೆ ದೂರನ್ನು ನೀಡಿಸುತ್ತಾರೆ” ಮಾಜಿ ಮುಖ್ಯಮಂತ್ರಿ, ಹಾಲಿ ಕೇಂದ್ರ ಸಚಿವರಾದ ಹೆಚ್. ಡಿ. ಕುಮಾರಸ್ವಾಮಿಯವರ ವಿರುದ್ಧ ಈಗಾಗಲೇ ಪ್ರಾಸಿಕ್ಯೂಷನ್ಗೆ ಅನುಮತಿ ಕೋರಿ ವರ್ಷಗಳಾದ್ರೂ ರಾಜ್ಯಪಾಲರ ಜಾಣ ಕುರುಡತನ ಎದ್ದು ಕಾಣಿಸುತ್ತಿದೆ.
ಶೋಷಿತ ವರ್ಗಗಳಿಗೆ ರಾಜಕೀಯ ಪ್ರಾತಿನಿಧ್ಯತೆಯೂ ಇಲ್ಲ, ಅಧಿಕಾರದ ಗದ್ದುಗೆಯನ್ನೇರಿದ ಮೂವರು ಮುಖ್ಯಮಂತ್ರಿಗಳನ್ನು ಕೆಳಗಿಳಿಸಲು
ನಡೆಸಿದ ಕುತಂತ್ರಗಳು ಬಂಗಾರಪ್ಪ, ವೀರಪ್ಪ ಮೊಯಿಲಿಯವರು ಸಾಕ್ಷಿಯಾಗುತ್ತಾರೆ. ಪ್ರಸ್ತುತ ಸಿದ್ದರಾಮಯ್ಯನವರನ್ನು ಟಾರ್ಗೆಟ್ ಮಾಡುತ್ತಿರುವುದನ್ನು ಶೋಷಿತ ವರ್ಗಗಳು ಗಮನಿಸುತ್ತಿವೆ ಇದೇ ರೀತಿ ಮುಂದುವರೆದರೆ ಅಹಿಂದ ವರ್ಗಗಳು ಸಿಡಿದೇಳುವ ದಿನಗಳು ದೂರವಿಲ್ಲ. ಅಹಿಂದ ವರ್ಗಗಳಿಗೆ ಆಗುತ್ತಿರುವ ಅನ್ಯಾಯಗಳನ್ನು ಜನರ ಮುಂದೆ ಹೇಳಿ ಜಾಗೃತಿ ಮೂಡಿಸುವ ಕೆಲಸ “ಸ್ವಾಭಿಮಾನಿ ಬಳಗ ಮತ್ತು ಅಹಿಂದ ಸಂಘಟನೆ” ಮಾಡುತ್ತದೆ ಎಂದು ಜಿ. ಬಿ. ವಿನಯ್ಕುಮಾರ್ ಹೇಳಿದ್ದಾರೆ.