MYSURU : ರಾಜಕೀಯ ಕ್ಷೇತ್ರದಲ್ಲಿ ಕುಟುಂಬ ರಾಜಕಾರಣದಿಂದಾಗಿ ನಿಷ್ಠಾವಂತ ಕಾರ್ಯಕರ್ತರಿಗೆ ಅವಕಾಶಗಳು ಸಿಗದೇ ಇರುವುದರಿಂದ “ಜೈಕಾರ ಹಾಕಲು, ಓಟ್ ಹಾಕಿಸಲು, ಶಾಮಿಯಾನ, ಬಾವುಟ ಕಟ್ಟದಕ್ಕೆ ಮಾತ್ರ ಸೀಮಿತಗೊಳಿಸುತ್ತಿದ್ದಾರೆ” ಬದಲಾವಣೆಗಾಗಿ “ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿ ಮುಖ್ಯಮಂತ್ರಿಯಾದಿಯಾಗಿ, ಕೆಪಿಸಿಸಿ ರಾಜ್ಯಾಧ್ಯಕ್ಷರು, ಕಾರ್ಯಾಧ್ಯಕ್ಷರು, ಸಚಿವರುಗಳು, ಎಐಸಿಸಿ ಯವರ ಗಮನದಲ್ಲೂ ಇದ್ದರೂ ದಾವಣಗೆರೆ ಲೋಕಸಭಾ ಕ್ಷೇತ್ರದ ಟಿಕೆಟ್ ಕೊನೆ ಕ್ಷಣದಲ್ಲಿ ತಪ್ಪಿಸಲಾಯಿತು. ಮತದಾರರ ಅಭಿಪ್ರಾಯಕ್ಕೆ ಮನ್ನಣೆ ನೀಡಿ ” ಪಕ್ಷೇತರ ಅಭ್ಯರ್ಥಿಯಾಗಿ” ಸ್ಪರ್ಧೆ ಮಾಡಿದ್ದರೂ ಸಹ “ಸೋಲಿಸಲು ತಂತ್ರಗಳನ್ನು ಹೆಣೆಯಲಾಯಿತು” ಎಲ್ಲಾ ಕಡೆಯಿಂದಲೂ ಕಟ್ಟಿ ಹಾಕುವ ಕಾರ್ಯತಂತ್ರಗಳು ನಡೆದವು. ಆದರೂ ಸಹ ನನಗೆ 42907 ಮತಗಳನ್ನು ಕ್ಷೇತ್ರದ ಸ್ವಾಭಿಮಾನಿ ಮತದಾರರು ನೀಡಿ ಆತ್ಮಸ್ಥೈರ್ಯ ತುಂಬಿದ್ದಾರೆ. ರಾಜಕೀಯ ಕ್ಷೇತ್ರದೊಂದಿಗೆ ಉತ್ತಮ ಶಿಕ್ಷಣವನ್ನು ನೀಡುವುದಕ್ಕಾಗಿ ದಾವಣಗೆರೆಯಲ್ಲಿ “ಇನ್ಸೈಟ್ ಆಕಾಡೆಮಿ” ಯನ್ನು ಪ್ರಾರಂಭಿಸುತ್ತಿರುವುದಾಗಿ ಹೆಚ್. ವಿಶ್ವನಾಥರೊಂದಿಗಿನ ಚರ್ಚೆಯಲ್ಲಿ ವಿನಯಕುಮಾರ್ ಹೇಳಿದರು.
ಇಂದು ಮೈಸೂರಿನ ಅವಾಂಟ್ ಬಿಕೆಜಿ ಆಸ್ಪತ್ರೆಗೆ ಭೇಟಿ ನೀಡಿ, ಅನಾರೋಗ್ಯದ ನಿಮಿತ್ತ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ಮಂತ್ರಿಗಳು, ಕರ್ನಾಟಕ ಸರ್ಕಾರ ಹಾಗೂ ಹಾಲಿ ವಿಧಾನ ಪರಿಷತ್ ಸದಸ್ಯರಾದ, ಸನ್ಮಾನ್ಯ ಶ್ರೀ ಎಚ್ ವಿಶ್ವನಾಥ್ ಅವರ ಆರೋಗ್ಯ ವಿಚಾರಿಸಿ ಶೀಘ್ರ ಗುಣಮುಖರಾಗಲೆಂದು ಹಾರೈಸಿದರು.
ಈ ಸಂಧರ್ಭದಲ್ಲಿ ಉಭಯ ನಾಯಕರು ದಾವಣಗೆರೆ ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದರ ಬಗ್ಗೆ ಹಾಗೂ ಮುಂದಿನ ರಾಜಕೀಯ ನಡೆ ಬಗ್ಗೆ ಕೂಲಂಕಷವಾಗಿ ಚರ್ಚಿಸಿ, ಉಭಯ ಕುಶಲೋಪರಿ ತಿಳಿದುಕೊಂಡರು.