head

ಎಚ್ಚರಿಕೆ : ಅಹಿಂದ ವರ್ಗದ ಮುಖ್ಯಮಂತ್ರಿ ಬದಲಾವಣೆ ಮಾಡಿದರೆ ಕಾಂಗ್ರೇಸ್ ಪಕ್ಷ ರಾಜ್ಯದಲ್ಲಿ ಅಸ್ತಿತ್ವ ಕಳೆದುಕೊಳ್ಳಲಿದೆ : ಅಹಿಂದ ಚೇತನ

ಭಾರತ ಸ್ವಾತಂತ್ರö್ಯವಾದ ನಂತರ 76 ವರ್ಷಗಳಿಂದ ಅಲ್ಪಸಂಖ್ಯಾತ – ಹಿಂದುಳಿದ – ದಲಿತ ವರ್ಗಗಳನ್ನು ಪ್ರತಿನಿಧಿಸುವವರುವ ಎಷ್ಟು ಜನ ಮುಖ್ಯಮಂತ್ರಿಗಳಾಗಿದ್ದಾರೆ, 2 ವರ್ಷಗಳು ಎಸ್. ಬಂಗಾರಪ್ಪನವರು, 2 ವರ್ಷಗಳು ವೀರಪ್ಪ ಮೊಯಿಲಿಯವರು, 5 ವರ್ಷಗಳು ಯಶಸ್ವಿಯಾಗಿ ಮುಖ್ಯಮಂತ್ರಿಯಾಗಿ 2023ರಲ್ಲಿ ಮತ್ತೊಮ್ಮೆ ಅಹಿಂದ ವರ್ಗಗಳ ಬೆಂಬಲದೊAದಿಗೆ 136 ಸ್ಥಾನಗಳನ್ನು ಗಳಿಸಿ, ಮತ್ತೊಮ್ಮೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾರೆ. ರಾಜ್ಯದಲ್ಲಿ ಸರಾಸರಿ 80%ಎಷ್ಟಿರುವ ಅಹಿಂದ ವರ್ಗಗಳು ಓಟ್ ಬ್ಯಾಂಕನ್ನಾಗಿಸಿಕೊAಡಿರುವ ರಾಜಕೀಯ ಪಕ್ಷಗಳು 20%ರಷ್ಟಿರುವ ಸಮುದಾಯಗಳು ರಾಜ್ಯದ ಆಡಳಿತದ ಚುಕ್ಕಾಣಿಯನ್ನು ಹಿಡಿದಿದ್ದಾರೆ. 2023ರಲ್ಲಿ ಮತ್ತೊಮ್ಮೆ ಅವಕಾಶ ಸಿದ್ದರಾಮಯ್ಯನವರಿಗೆ ಸಿಕ್ಕಿದೆ. ಮುಖ್ಯಮಂತ್ರಿಯಾಗಿ ಮುಂದುವರೆಯಲು ಅವಕಾಶ ನೀಡಬೇಕಾದವರು ಸರ್ಕಾರಿ ಕಾರ್ಯಕ್ರಮದಲ್ಲಿ ವಿಶ್ವ ಒಕ್ಕಲಿಗ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಚಂದ್ರಶೇಖರನಾಥಸ್ವಾಮಿಜಿಯವರು ಬಹಿರಂಗವಾಗಿ “ಡಿ. ಕೆ. ಶಿವಕುಮಾರ್‌ರವರಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡುವಂತೆ ಒತ್ತಾಯ ಮಾಡಿರುವುದು ಎಷ್ಟರ ಮಟ್ಟಿಗೆ ಸರಿ ಅನ್ನಿಸುತ್ತದೆ.”

ರಾಜ್ಯದಲ್ಲಿ 80%ರಷ್ಟು ಅಹಿಂದ ವರ್ಗಗಗಳು ಇದ್ದರೂ ಸಹ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಗಳಲ್ಲಿ 20%ರಷ್ಟಿರುವವರ ಪಾಲಾಗುತ್ತಿದೆ.ಇತ್ತೀಚಿಗೆ ನಡೆದ ಲೋಕಸಭಾ ಚುನಾವಣೆಯಲ್ಲೂ ಸಹ ಅಹಿಂದ ವರ್ಗಗಳಿಗೆ ಬೆರಳೆಣಿಕೆಯಷ್ಟು ಅವಕಾಶಗಳನ್ನು ನೀಡಲಾಗಿತ್ತು ಅಲ್ಲೂ ಅವಕಾಶಗಳನ್ನು ಕಸಿದುಕೊಂಡು ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡುವಂತೆ ಕೇಳುವುದು ಯಾವ ನ್ಯಾಯ?

ದಾವಣಗೆರೆ ಜಿಲ್ಲೆ, ಚನ್ನಗಿರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಬಸವರಾಜು ಶಿವಗಂಗಾರವರು ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿAದಲೂ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬದಲಾವಣೆಯ ಬಗ್ಗೆ ಅಪಸ್ವರದ ಮಾತುಗಳನ್ನು ಆಡುತ್ತಿರುವುದು. ಪ್ರಸ್ತುತ ಸ್ವಾಮೀಜೀಯವರ ಬಹಿರಂಗ ಹೇಳಿಕೆಯ ಬೆನ್ನಲ್ಲೇ ಮತ್ತೊಮ್ಮೆ “ಬಹಿರಂಗವಾಗಿ ಮುಖ್ಯಮಂತ್ರಿ ಬದಲಾವಣೆ ವಿಷಯ”ವನ್ನು ಪ್ರಸ್ತಾಪಿಸಿದ್ದಾರೆ. ಚನ್ನಗಿರಿ ಕ್ಷೇತ್ರದಲ್ಲಿರುವ ಅಹಿಂದ ವರ್ಗಗಗಳು 2023ರ ವಿಧಾನಸಭಾ ಹಾಗೂ 2024ರ ಲೋಕಸಭಾ ಚುನಾವಣೆಯಲ್ಲಿ ಅಹಿಂದ ವರ್ಗಗಳು ಕಾಂಗ್ರೇಸ್ ಪರವಾಗಿ ಮತ ಚಲಾಯಿಸಿದ್ದಾರೆ. ಚನ್ನಗಿರಿ ಶಾಸಕರಿಗೆ ಅಷ್ಟೊಂದು ಅಭಿಮಾನವಿದ್ದರೆ, ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಪಕ್ಷೇತರರಾಗಿ ಸ್ಪರ್ಧೆ ಮಾಡಲಿ. ಮುಖ್ಯಮಂತ್ರಿಗಳ ವಿಷಯವಾಗಲೀ ಮತ್ಯಾವುದೇ ವಿಷಯವಾಗಲೀ ಅವರ ಪಕ್ಷದ ಅಂತರಿಕ ಸಭೆಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸಲಿ ಅದು ಬಿಟ್ಟು ಅಹಿಂದ ವರ್ಗವನ್ನು ಪ್ರತಿನಿಧಿಸುತ್ತಿರುವ ಸಿದ್ದರಾಮಯ್ಯನವರ ಮುಖ್ಯಮಂತ್ರಿ ಸ್ಥಾನದ ಪದಚ್ಯುತಿಯ ಬಗ್ಗೆ ಪ್ರಸ್ತಾಪ ಮಾಡುತ್ತಿ ರುವುದು ಈ ವರ್ಗಗಳಿಗೆ ಮಾಡುತ್ತಿರುವ ಅನ್ಯಾಯವಾಗುತ್ತದೆ. ಮುಂದಿನ 4 ವರ್ಷಗಳ ಅವಧಿಯನ್ನು ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಮುಂದುವರೆಯಬೇಕು, ಪದಚ್ಯುತಿಗೊಳಿಸಲು ಪ್ರಯತ್ನಗಳು ನಡೆಸಿದರೆ ಮುಂದಿನ ದಿನಗಳಲ್ಲಿ ಕರ್ನಾಟಕ ರಾಜ್ಯ ಕಾಂಗ್ರೇಸ್ ಪಕ್ಷ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳಲಿದೆ ಅಂತಹ ದುಸ್ಸಾಹಸಕ್ಕೆ ಕೈ ಹಾಕಬಾರದೆಂದು ಅಹಿಂದ ಚೇತನ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜು ಮೌರ್ಯ ದಾವಣಗೆರೆ, ಚಂದ್ರು ದೀಟೂರ್, ಎಸ್. ಎಂ. ಸಿದ್ದಲಿಂಗಪ್ಪ, ಪರ್ವೇಜ್ ಹುಸೇನ್, ಹಸನ್ ಬಾಬು, ಸಕ್ರಾö್ಯನಾಯ್ಕ ಎಚ್ಚರಿಕೆಯನ್ನು ನೀಡಿದ್ದಾರೆ.

Leave a Comment

Your email address will not be published. Required fields are marked *