ಸ್ವಾತಂತ್ರö್ಯ ಭಾರತದಲ್ಲಿ 80%ರಷ್ಟಿರುವ ಅಹಿಂದ ವರ್ಗಗಳಿಂದ ಮುಖ್ಯಮಂತ್ರಿಗಳಾಗಿರುವುದು
ಕೆಲವೇ ಕೆಲವರು ಮಾತ್ರ, ಶೋಷಿತ ವರ್ಗಗಳನ್ನು ಓಟ್ ಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿರುವ ಸಮಯದಲ್ಲಿ
2013ರಲ್ಲಿ ಕಾಂಗ್ರೇಸ್ ಪಕ್ಷವನ್ನು ಅಧಿಕಾರಕ್ಕೆ ತಂದವರು ಸಿದ್ದರಾಮಯ್ಯನವರು. ಮುಖ್ಯಮಂತ್ರಿಯಾಗಿ
5 ವರ್ಷಗಳ ಕಾಲ ಆಡಳಿತ ನಡೆಸಿ, ದಾಖಲೆಯನ್ನು ನಿರ್ಮಿಸಿದವರು, ದೇಶದಲ್ಲಿ
ಅತಿ ಹೆಚ್ಚು ಬಾರಿ ಬಡ್ಜೆಟ್ ಮಂಡಿಸಿರುವ ಕೀರ್ತಿ ಸಿದ್ದರಾಮಯ್ಯನವರದ್ದಾಗಿದೆ.
ಅಂಕಿ ಅಂಶಗಳ ಮುÆಲಕ ಪ್ರಧಾನಿ ನರೇಂದ್ರ ಮೋದಿಯವರನ್ನು ನೇರವಾಗಿ ಖಡಕ್ಕಾಗಿ ಪ್ರಶ್ನಿಸುವಂತಹ ವ್ಯಕ್ತಿತ್ವವುಳ್ಳ
ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿ ಸ್ಥಾನದಿಂದ “ಪದಚ್ಯುತಿಗೊಳಿಸುವ” ಕುತಂತ್ರಗಳು ನಡೆಯುತ್ತಿವೆ.
ರಾಜ್ಯಪಾಲರು ಅತುರವಾಗಿ ಷೋಕಾಸ್ ನೋಟೀಸ್ ನೀಡಿರುವುದರಿಂದ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆ ಎಂಬುದು ಸ್ಪಷ್ಟವಾಗುತ್ತಿದೆ.
ಇಂಡಿಯಾ ಮೈತ್ರಿ ಕೂಟ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ರಾಜ್ಯಪಾಲರು ಮತ್ತು ಅಲ್ಲಿನ ಮುಖ್ಯಮಂತ್ರಿಗಳ ನಡುವಿನ ರಾಜಕೀಯ ಸಂಘರ್ಷಗಳನ್ನು ದೇಶದ ಜನರು ನೋಡುತ್ತಿದ್ದಾರೆ.
80% ಜನಸಂಖ್ಯೆಯನ್ನು ಹೊಂದಿರುವ ಅಹಿಂದ ವರ್ಗಗಳ ಮುಖ್ಯಮಂತ್ರಿಯನ್ನು ಪದಚ್ಯುತಿಗೊಳಿಸುವ ಯಾವ ಕುತಂತ್ರಗಳು ಫಲಿಸುವುದಿಲ್ಲ.
ಪದಚ್ಯುತಿಗೆ ವಾಮಮಾರ್ಗಗಳನ್ನು ಬಳಸಿದರೆ ರಾಜ್ಯದ ಜನ ರೊಚ್ಚಿಗೇಳುತ್ತಾರೆಂದು ರಾಜ್ಯದ ಅಹಿಂದ ನಾಯಕ ಜಿ. ಬಿ. ವಿನಯ್‌ಕುಮಾರ್ ಎಚ್ಚರಿಕೆ ನೀಡಿದ್ದಾರೆ.