head

ನ್ಯಾಮತಿ ತಾಲ್ಲೂಕಿನಿಂದ ಸರ್ಕಾರಿ ಶಾಲೆಗಳ ಉಳಿಸಿ, “ನಮ್ಮ ನಡೆ ಸರ್ಕಾರಿ ಶಾಲೆಗಳ ಕಡೆಗೆ ಅಭಿಯಾನ” : ಜಿ. ಬಿ. ವಿನಯ್ ಕುಮಾರ್‌

ಉತ್ತಮ ಗುಣಮಟ್ಟದ ಶಿಕ್ಷಣಕ್ಕಾಗಿ
ಮುಚ್ಚುತ್ತಿರುವ ಸರ್ಕಾರಿ ಶಾಲೆಗಳ ಉಳಿಸಿ,

“ನಮ್ಮ ನಡೆ ಸರ್ಕಾರಿ ಶಾಲೆಗಳ ಕಡೆಗೆ ಅಭಿಯಾನ”ವನ್ನು ನಡೆಸಲು ವಿನಯಮಾರ್ಗ ಟ್ರಸ್ಟ್, ಸ್ವಾಭಿಮಾನಿ ಬಳಗದ ಮೂಲಕ ಇನ್‌ಸೈಟ್ಸ್ ಐ.ಎ.ಎಸ್. ಅಕಾಡೆಮಿ ಸಂಸ್ಥಾಪಕರಾದ ಜಿ. ಬಿ. ವಿನಯ್ ಕುಮಾರ್‌ರವರು ಪ್ರಾರಂಭಿಸುತ್ತಿದ್ದಾರೆ. ಆಗಸ್ಟ್ ತಿಂಗಳ ಮೊದಲ ವಾರದಿಂದ ದಾವಣಗೆರೆ ಜಿಲ್ಲೆ, ನ್ಯಾಮತಿ ತಾಲ್ಲೂಕಿನಿಂದ
ಚಾಲನೆ ನೀಡುವುದಾಗಿ ತಿಳಿಸಿದ್ದಾರೆ. ತಾಲ್ಲೂಕಿನ ಪ್ರಾಥಮಿಕ, ಹಿರಿಯ ಪ್ರಾಥಮಿಕ, ಪ್ರೌಢಶಾಲೆ, ಪದವಿಪೂರ್ವ, ಪದವಿ ಶಾಲೆಗಳಿಗೂ ಭೇಟಿ ನೀಡಿ,
ಅಲ್ಲಿನ ಶಿಕ್ಷಣದ ವ್ಯವಸ್ಥೆ ಹಾಗೂ ಗುಣಮಟ್ಟ, ಮೂಲಭೂತ ಸೌಕರ್ಯಗಳ ಬಗ್ಗೆ ಅಧ್ಯಯನ ನಡೆಸಲಿದ್ದಾರೆ.

ದೇಶದ ಭವಿಷ್ಯವನ್ನು ರೂಪಿಸಬಲ್ಲ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯಬೇಕು.
ಸರ್ಕಾರಿ ಶಾಲೆಗಳನ್ನು ಉಳಿಸಬೇಕು. ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಪಡೆದು
ಉನ್ನತ ಮಟ್ಟದ ವ್ಯಾಸಂಗ ಪಡೆಯಬೇಕು, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವಂತಹ ಜ್ಞಾನದ ಜೊತೆಗೆ
ಧೈರ್ಯವನ್ನು ಹೆಚ್ಚಿಸಿಕೊಂಡು, ಅಧಿಕಾರಿಗಳಾಗಿ ರೂಪುಗೊಳ್ಳಬೇಕೆಂಬ ಸದುದ್ದೇಶದಿಂದ
“ನಮ್ಮ ನಡೆ ಸರ್ಕಾರಿ ಶಾಲೆಗಳ ಕಡೆಗೆ ಅಭಿಯಾನ”ವನ್ನು ಆರಂಭಿಸುತ್ತಿದ್ದಾರೆ.

ನ್ಯಾಮತಿ ತಾಲ್ಲೂಕಿನಿಂದ ಪ್ರಾರಂಭಿಸಿ
ದಾವಣಗೆರೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಎಲ್ಲಾ ಶಾಲೆಗಳಿಗೂ ತಂಡ ಭೇಟಿ ನೀಡುತ್ತಿದ್ದಾರೆ.

Leave a Comment

Your email address will not be published. Required fields are marked *