ಬೆಂಗಳೂರು-ಬೆಳಗಾವಿ 20653 ಮತ್ತು ಬೆಳಗಾವಿ-ಬೆಂಗಳೂರು 20654 ಸೂಪರ್ ಫಾಸ್ಟ್ ರೈಲಿಗೆ
“ಸಂಗೊಳ್ಳಿ ರಾಯಣ್ಣ ಎಕ್ಸ್ಪ್ರೆಸ್” ಎಂದು ನಾಮಕರಣ ಮಾಡಿ, ದೇಶಭಕ್ತ, ಹುತಾತ್ಮರಿಗೆ ಗೌರವ
ಸಲ್ಲಿಸಬೇಕೆಂದು ದಾವಣಗೆರೆಯಲ್ಲಿ ಕೇಂದ್ರ ರೈಲ್ವೆ ಸಚಿವರಾದ ವಿ. ಸೋಮಣ್ಣನವರಿಗೆ ಮನವಿ ಸಲ್ಲಿಸಲಾಯಿತು.
ಭಾರತ ದೇಶದ ಸ್ವಾತಂತ್ರ÷್ಯಕ್ಕಾಗಿ, ಸ್ವಾತಂತ್ರ÷್ಯ ಸಂಗ್ರಾಮಕ್ಕೂ ಮುಂಚಿತವಾಗಿ ಕಿತ್ತೂರು ರಾಣಿ ಚೆನ್ನಮ್ಮಾಜಿಯವರ ಮಗನಾಗಿ, ಬ್ರಿಟಿಷರಿಗೆ ಮೊದಲ ಸೋಲಿನ ರುಚಿ ತೋರಿಸಿದ್ದ, ಬ್ರಿಟಿಷರಿಗೆ ಸಿಂಹಸ್ವಪ್ನವಾಗಿ ಕಾಡಿದ, ದೇಶಕ್ಕಾಗಿ ಜೀವವನ್ನು ತೆತ್ತು “ಹುತಾತ್ಮ” ರಾದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರು ಹುಟ್ಟಿದ್ದು ಆಗಸ್ಟ್ 15, ಬ್ರಿಟಿಷರು ನೇಣಿಗೆ ಹಾಕಿದ್ದು, ಸಂಗೊಳ್ಳಿ ರಾಯಣ್ಣ ಹುತಾತ್ಮರಾಗಿದ್ದು, ಜನವರಿ 26, ಈ ಎರಡು ದಿನಗಳು ಸ್ವಾತಂತ್ರೊ÷್ಯÃತ್ಸವ ಮತ್ತು ಗಣರಾಜ್ಯೋತ್ಸವ ಭಾರತ
ದೇಶಕ್ಕೆ ಅತಿ ಮುಖ್ಯವಾದವು. ಈ ಎರಡು ದಿನಗಳು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರ ಹುಟ್ಟು ಮತ್ತು ಸಾವಿನ ಮಹತ್ತರ ದಿನಗಳು. ಇಂತಹ ವೀರನನ್ನು ಪಡೆದ ನಮ್ಮ ಭಾರತೀಯರು ಧನ್ಯರು.
ರಾಯಣ್ಣ ಹುಟ್ಟಿದ್ದು ಬೆಳಗಾವಿ ಜಿಲ್ಲೆ, ಬೈಲಹೊಂಗಲ ತಾಲ್ಲೂಕಿನ ಸಂಗೊಳ್ಳಿಯಲ್ಲಿ, ರಾಯಣ್ಣನನ್ನು ಗಲ್ಲಿಗೇರಿಸಿದ್ದು ಬೆಳಗಾವಿ ಜಿಲ್ಲೆ, ಖಾನಾಪುರ ತಾಲ್ಲೂಕಿನ ನಂದಗಢದಲ್ಲಿ. ಇಂತಹ ಮಹಾನ್ ಪುರುಷನಿಗೆ ಗೌರವ ಸಲ್ಲಿಸಬೇಕಾದುದ್ದು ನಮ್ಮೆಲ್ಲರ ಕರ್ತವ್ಯ. ಬೆಳಗಾವಿಯಿಂದ ಹೊರಡುವ ಸೂಪರ್ ಫಾಸ್ಟ್ ರೈಲು (20654) ರಾತ್ರಿ 9-00 ಗಂಟೆಗೆ ಹೊರಡುತ್ತದೆ. ಅದೇ ರೈಲು (20653) ರಾತ್ರಿ 9-00 ಗಂಟೆಗೆ ಬೆಂಗಳೂರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ
ಹೊರಡುತ್ತದೆ.
ಬೆಂಗಳೂರು-ಬೆಳಗಾವಿ 20653 ಮತ್ತು ಬೆಳಗಾವಿ-ಬೆಂಗಳೂರು 20654 ಸೂಪರ್ ಫಾಸ್ಟ್ ರೈಲಿಗೆ
“ಸಂಗೊಳ್ಳಿ ರಾಯಣ್ಣ ಎಕ್ಸ್ಪ್ರೆಸ್” ಎಂದು ನಾಮಕರಣ ಮಾಡಿ, ದೇಶಭಕ್ತ, ಹುತಾತ್ಮರಿಗೆ ಗೌರವ
ಸಲ್ಲಿಸಬೇಕೆಂದು ದಾವಣಗೆರೆಯಲ್ಲಿ ಕೇಂದ್ರ ರೈಲ್ವೆ ಸಚಿವರಾದ ವಿ. ಸೋಮಣ್ಣನವರಿಗೆ ಮನವಿ ಸಲ್ಲಿಸಲಾಯಿತು.
ರಾಜ್ಯ ಸಂಚಾಲಕ ರಾಜು ಮೌರ್ಯ, ಜಿಲ್ಲಾಧ್ಯಕ್ಷ ಸಿ. ವೀರಣ್ಣ, ಕಾರ್ಯಾಧ್ಯಕ್ಷ ಚಂದ್ರು ದೀಟೂರ್, ಉಪಾಧ್ಯಕ್ಷರಾದ ಜಿ. ಷಣ್ಮುಖಪ್ಪ, ಸಲ್ಲಳ್ಳಿ ಹನುಮಂತಪ್ಪ, ಪ್ರಧಾನ ಕಾರ್ಯದರ್ಶಿ ಬಿ. ಜಿ. ಘನರಾಜ್, ಕಾರ್ಯದರ್ಶಿ ಎಸ್. ಎಂ. ಸಿದ್ದಲಿಂಗಪ್ಪ, ಖಜಾಂಚಿ ಆರ್. ಬಿ. ಪರಮೇಶ್, ಕಛೇರಿ ಕಾರ್ಯದರ್ಶಿ ರವೀಂದ್ರ ಬಾಬು, ಸಂಚಾಲಕರಾದ ನಾಗರಾಜ್ (ಸ್ಟಾö್ಯಂಡ್) ಗಿರೀಶ್ ಐರಣಿ, ಪ್ರವೀಣ್ ನಿಟುವಳ್ಳಿ ಇದ್ದರು