ದಿನಾಂಕ 17-11-2024 ರ ಭಾನುವಾರದಂದು ಬೆಳಿಗ್ಗೆ 11-00 ಗಂಟೆಗೆ ಸ್ವಾಭಿಮಾನಿ ಬಳಗದ ಉದ್ಘಾಟನೆಯನ್ನು
ಹಮ್ಮಿಕೊಳ್ಳಲಾಗಿದೆ. ಜೊತೆಗೆ ಸಾಧಕರಿಗೆ ಗೌರವ ಸನ್ಮಾನ, ಶ್ರೀ ವಾಲ್ಮೀಕಿ ಜಯಂತಿ, ಶ್ರೀ ಒನಕೆ ಓಬವ್ವ ಜಯಂತಿ ಹಾಗೂ
ಶ್ರೀ ಕನಕದಾಸರ ಜಯಂತಿಯ ಆಚರಣೆಯೊಂದಿಗೆ ಸ್ವಾಭಿಮಾನಿ ಬಳಗದ ವೆಬ್‌ಸೈಟನ್ನು ಲೋಕಾರ್ಪಣೆ ಮಾಡಲಾಗುತ್ತಿದೆ. ಎಂದು ಸ್ವಾಭಿಮಾನಿ ಬಳಗದ ಸಂಸ್ಥಾಪಕ ಜಿ. ಬಿ. ವಿನಯ್ ಕುಮಾರ್ ಹೇಳಿದ್ದಾರೆ
ಈಗಾಗಲೇ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದು, ಅವಕಾಶ ವಂಚಿತರು, ಶೋಷಿತರಿಗಾಗಿ ವೇದಿಕೆಯನ್ನು ಕಲ್ಪಿಸುವ
ಸದುದ್ದೇಶದಿಂದ “ಸ್ವಾಭಿಮಾನಿ ಬಳಗ”ವನ್ನು ನೋಂದಣಿ ಮಾಡಿಸಲಾಗಿದ್ದು, ದೇಶದ ಸಂವಿಧಾನದ ಅಡಿಯಲ್ಲಿ ಶೈಕ್ಷಣಿಕ,
ಔದ್ಯೋಗಿಕ, ರಾಜಕೀಯವಾಗಿ ಜಾಗೃತಿ ಮತ್ತು ಸಂಘಟನೆ, ಯುವಕರಿಗಾಗಿ, ನಾಯಕತ್ವ ಕಾರ್ಯಾಗಾರಗಳು,
ಮಹಿಳೆಯರ ಸಬಲೀಕರಣ, ರೈತರಿಗಾಗಿ ಕೃಷಿ ವಿಜ್ಞಾನ ಕೇಂದ್ರದ ಸ್ಥಾಪನೆ, ಕಾನೂನು ಅರಿವು, ಆರೋಗ್ಯ ಶಿಬಿರಗಳು,
ಉದ್ಯೋಗ ಮೇಳಗಳು, ಸಾಮೂಹಿಕ ವಿವಾಹಗಳು, ಜನಪರ ಕಾರ್ಯಕ್ರಮಗಳೊಂದಿಗೆ 31 ಜಿಲ್ಲೆಗಳಲ್ಲಿ ಒಗ್ಗೂಡಿಸುವ
ಬೀದರ್‌ನಿಂದ ಚಾಮರಾಜನಗರದವರೆವಿಗೂ ನೆಟ್‌ವರ್ಕ್ ಸೃಷ್ಟಿಸುವುದಕ್ಕಾಗಿ, ರಾಜ್ಯ ಸಮಿತಿ, ಜಿಲ್ಲಾ ಸಮಿತಿಗಳು,
ತಾಲ್ಲೂಕು ಸಮಿತಿಗಳು, ನಗರ ಸಮಿತಿಗಳು, ಮಹಿಳಾ ಸಮಿತಿಗಳು, ರೈತ ಸಮಿತಿಗಳು, ಕಾರ್ಮಿಕ ಸಮಿತಿಗಳಲ್ಲಿ
ತೊಡಗಿಸಿಕೊಳ್ಳಲು ಸ್ವಾಭಿಮಾನಿಗಳಿಗೆ ಅವಕಾಶಗಳನ್ನು ನೀಡಲಾಗುತ್ತಿದೆ. ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ,
ಸಲಹೆ, ಸಹಕಾರವನ್ನು ನೀಡಬೇಕಾಗಿ ವಿನಯ್ ಕುಮಾರ್ ರವರು ಹೃತ್ಪೂರ್ವಕವಾಗಿ ಆಹ್ವಾನಿಸಿದ್ದಾರೆ.
ದಿನಾಂಕ : 17-11-2024, ಭಾನುವಾರ
ಸಮಯ : ಬೆಳಿಗ್ಗೆ 11-00 ಗಂಟೆಗೆ
ಸ್ಥಳ : ನಂ. 2415/45, 10ನೇ ಕ್ರಾಸ್,
ಎಸ್. ಎಸ್. ಲೇಔಟ್ “ಎ” ಬ್ಲಾಕ್, ದಾವಣಗೆರೆ-577004.
ಜಿ.ಬಿ. ವಿನಯ್‌ಕುಮಾರ್
ಸಂಸ್ಥಾಪಕ ರಾಜ್ಯಾಧ್ಯಕ್ಷರು
ಸ್ವಾಭಿಮಾನಿ ಬಳಗ (ರಿ.)