head

ದಾವಣಗೆರೆ “ಸರ್ಕಾರಿ ಶಾಲೆಗಳನ್ನು ಉಳಿಸಿ-ಪುನಶ್ಚೇತನಗೊಳಿಸಿ ಅಭಿಯಾನ” : ಬಿ. ಜಿ. ವಿನಯಕುಮಾರ್

ಹಗರಣಗಳು ಸಾಕು ಶಿಕ್ಷಣ ನೀಡಿ

ಕೇಂದ್ರ ಸರ್ಕಾರದ “ನೀಟ್ ಹಗರಣ” ರಾಜ್ಯ ಸರ್ಕಾರದ ವಾಲ್ಮೀಕಿ, ಮುಡಾ ಹಗರಣಗಳಲ್ಲೇ ಕಾಲಕಳೆಯುತ್ತಾ ಒಬ್ಬರ ಮೇಲೊಬ್ಬರ ಮೇಲೆ
ವಾಗ್ದಾಳಿಗಳನ್ನು ವಿಧಾನಸಭೆ ಮತ್ತು ವಿಧಾನಪರಿಷತ್, ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಮುಂದುವರೆಸುತ್ತಾ, ಜನರನ್ನು ಮೂರ್ಖರನ್ನಾಗಿಸುತ್ತಿದ್ದಾರೆ. ಜನರ ತೆರಿಗೆ ಹಣದಿಂದ ಸವಲತ್ತುಗಳನ್ನುಪಡೆಯುತ್ತಾ, ಜನ ಸಾಮಾನ್ಯರಿಗೆ ಬೇಕಾಗುವಂತಹ ಕೆಲಸಗಳನ್ನು ಜಾಣ ಕುರುಡುತನದಿಂದ ಮರೆಯಿಸಿಬಿಡುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ.


ಕರ್ನಾಟಕ ರಾಜ್ಯದಲ್ಲಿ ಕನ್ನಡ ಶಾಲೆಗಳನ್ನು ಮುಚ್ಚಲಾಗುತ್ತಿದೆ. ಕಾರಣ ಮಕ್ಕಳು ಶಾಲೆಗೆ ಬರುತ್ತಿಲ್ಲ. ಅಡ್ಮಿಷನ್ ಪಡೆಯುತ್ತಿಲ್ಲ ಎಂಬ ಕಾರಣಕ್ಕೆ
ಶಿಕ್ಷಣ ಕ್ಷೇತ್ರಕ್ಕೆಂದೇ ಬಡ್ಜೆಟ್‌ನಲ್ಲಿ ಸಾವಿರಾರು ಕೋಟಿ ಹಣ ಹಂಚಿಕೆಯಾಗುತ್ತದೆ. ಖಾಸಗಿ ಶಾಲೆಗಳಲ್ಲಿ ಕಡಿಮೆ ವೇತನ ಪಡೆಯುವ
ಶಿಕ್ಷಕರಿಂದ ಉತ್ತಮ ಗುಣಮಟ್ಟದ ಶಿಕ್ಷಣ ಮತ್ತು ಉತ್ತಮ ಫಲಿತಾಂಶ ಸಿಗುವಾಗ, ಸರ್ಕಾರಿ, ಅನುದಾನಿತ ಶಾಲೆಗಳ ಶಿಕ್ಷಕರುಗಳಿಗೆ ಭರಪೂರ
ವೇತನ, ಭತ್ಯೆಗಳನ್ನು ನೀಡಲಾಗುತ್ತಿದೆ ಆದರೂ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿಲ್ಲ ಯಾಕೆ ?

ಒಂದು ಕಡೆ ಸರ್ಕಾರಿ ಶಾಲೆಗಳು ಮುಚ್ಚುತ್ತಿರುವಾಗ, ಮತ್ತೊಂದು ಕಡೆ ಸರ್ಕಾರಿ ಶಾಲೆಗಳ ಶಿಥಿಲ ಕಟ್ಟಡ,
ಮೂಲಭೂತ ಸೌಕರ್ಯಗಳ ಕೊರತೆ. ಆಯ್ಕೆಯಾಗುವ ಜನಪ್ರತಿನಿಧಿಗಳಿಗೆಅನುದಾನಗಳಲ್ಲಿ ಎಷ್ಟೆಷ್ಟು ತಮ್ಮ ಪಾಲಿನ ಜೋಳಿಗೆಗೆ ಹಾಕಿಸಿಕೊಳ್ಳಬೇಕೆಂಬ ಚಿಂತೆ, ಮುಂದಿನ ಚುನಾವಣೆಗಳಲ್ಲಿ ಗೆಲ್ಲೋದರ ಕಡೆ ಗಮನ.ಶಾಲೆಗಳ ಬಗ್ಗೆ ಗಮನ ಹರಿಸಲು ಸಾಧ್ಯವೇ ? “ಸರ್ಕಾರಿ ಶಾಲೆಗಳನ್ನು ಉಳಿಸಿ-ಪುನಶ್ಚೇತನಗೊಳಿಸಿ” ಅಭಿಯಾನ ನಡೆಸುವಂತಹ ಅನಿವಾರ್ಯತೆ ನಮ್ಮ ಮುಂದಿರುವುದು ದೌಭಾಗ್ಯದ ಸಂಗತಿ”

ಸರ್ಕಾರಿ ಶಾಲೆಗಳನ್ನು ಉಳಿಸಿ-ಪುನಶ್ಚೇತನಗೊಳಿಸಿ

ವಿನಯ್‌ಕುಮಾರ್‌ರವರ “ಸ್ವಾಭಿಮಾನಿ ಬಳಗ”ದಿಂದ ದಾವಣಗೆರೆ ಜಿಲ್ಲೆಯ ಹರಿಹರ, ಹೊನ್ನಾಳಿ, ನ್ಯಾಮತಿ, ಚನ್ನಗಿರಿ, ಜಗಳೂರು ಮತ್ತು ದಾವಣಗೆರೆ ತಾಲ್ಲೂಕುಗಳಲ್ಲಿ
ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ, ಶಿಕ್ಷಣದ ಗುಣಮಟ್ಟ, ಕಾರ್ಯವೈಖರಿ ಮತ್ತು ಶಾಲೆಯಲ್ಲಿನ ಮೂಲಭೂತ ಸೌಕರ್ಯಗಳ ಬಗ್ಗೆ ಅಧ್ಯಯನ ನಡೆಸಲು, ಚಿಂತಕರು, ಯುವನಾಯಕರಾದಶ್ರೀ ಬಿ. ಜಿ. ವಿನಯಕುಮಾರ್ ಮುಂದಾಗಿದ್ದಾರೆ.

Leave a Comment

Your email address will not be published. Required fields are marked *