ವಿದ್ಯಾರ್ಥಿಗಳು ಮನಸ್ಸು ಮಾಡಿದರೆ ಎಂತಹ ಸಾಧನೆ ಮಾಡಲು ಸಾಧ್ಯ ಎಂಬುದಕ್ಕೆ ನಾನೇ ಸಾಕ್ಷಿಯಾಗಿ ನಿಲ್ಲುವೆ ಎಂದು, ತಾವು ಆರಂಭದಲ್ಲಿ ಬೆಂಗಳೂರಿನಲ್ಲಿ ಐಎಎಸ್ ತರಬೇತಿ ಕೇಂದ್ರದ ಸ್ಥಾಪನೆಯ ದಿನಗಳನ್ನು ವಿವರಿಸಿದರು. ಇಂದು ಸುಮಾರು ಏಳ ರಿಂದ ಎಂಟು ತರಬೇತಿ ಕೇಂದ್ರಗಳಲ್ಲಿ ಹತ್ತು ವರ್ಷದಲ್ಲೇ 1500ಕ್ಕೂ ಹೆಚ್ಚು ಸಾಧಕರು (IAS,IPS,IFS,IRS) ತಮ್ಮ ಸಂಸ್ಥೆಯಿಂದ ಹೊರಬಂದು ದೇಶದ ಎಲ್ಲಾ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವುದನ್ನು ಉಲ್ಲೇಖಿಸಿದರು.
ದಾವಣಗೆರೆ ವಿಶ್ವವಿದ್ಯಾಲಯದ ಪ್ರಥಮ ಸ್ಥಾನ ಪಡೆದ ಈ ಕಾಲೇಜಿನ ಎಸ್. ಸಿಂಧೂಬಾಯಿ ಅವರಂತಹ ಸಾಧನೆಯ ವಿದ್ಯಾರ್ಥಿಗಳು ಐಎಎಸ್/ಕೆಎಎಸ್ ವಿದ್ಯಾಭ್ಯಾಸ ಪಡೆಯಲು ಮುಂದಾದರೆ ಉಚಿತ ಶಿಕ್ಷಣ ನೀಡುವುದಾಗಿ ಅವರು ಹೇಳಿದರು. ರಾಜಕಾರಣದ ಮೂಲಕವೂ ಶಿಕ್ಷಣ ಸುಧಾರಣೆ – ವಿದ್ಯಾರ್ಥಿಗಳೇ ನೀವು ತಿಳಿದಂತೆ ಕೆಎಎಸ್ ಹಾಗೂ ಐಎಎಸ್ ಇರುವ ಅರ್ಥ ಒಂದಾದರೆ, ನಾನು ತಿಳಿದಿರುವಂತೆ ‘ಕೆಎಎಸ್ ಎಂದರೆ – ಎಂಎಲ್‌ಎ, ಐಎಎಸ್ ಎಂದರೆ – ಎಂಪಿ ಎಂಬುದಾಗಿದೆ’ ರಾಜ್ಯ ಯುವ ನಾಯಕರು, ಇನ್‌ಸೈಟ್ಸ್ ತರಬೇತಿ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕರು, ಜಿ.ಬಿ. ವಿನಯ್ ಕುಮಾರ್ ತಿಳಿಸಿದರು.