ನಮ್ಮ ನಡೆ ಸರ್ಕಾರಿ ಶಾಲೆಗಳ ಕಡೆಗೆ ಅಭಿಯಾನವು ಇಂದು ನ್ಯಾಮತಿ ತಾಲ್ಲೂಕಿನ ಸೂರಗೊಂಡನಕೊಪ್ಪ, ಹಳೆ ಜೋಗ, ಹೊಸ ಜೋಗ, ಚಿನ್ನಿಕಟ್ಟೆ, ಮಾದಾಪುರ, ಕೊಡತಾಳು, ಸವಳಂಗ ಗ್ರಾಮಗಳ ಕಿರಿಯ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆ ಪ್ರೌಡ ಶಾಲೆಗಳಿಗೆ ಸ್ವಾಭಿಮಾನಿ ಬಳಗದ ತಂಡವು ಭೇಟಿ ನೀಡಿ, ಶಾಲೆಯ ಮುಖ್ಯೋಪಾಧ್ಯಾಯರು, ಸಹ ಶಿಕ್ಷಕರು, ಎಸ.ಡಿ.ಎಮ್.ಸಿ ಸಮಿತಿಯ ಅಧ್ಯಕ್ಷರುಗಳು ಮತ್ತು ಸದಸ್ಯರುಗಳು ಹಾಗೂ ಗ್ರಾಮಸ್ಥರೊಂದಿಗೆ, ಸರ್ಕಾರಿ ಶಾಲೆಯ ಸ್ಥಿತಿ ಗತಿಗಳನ್ನು ಕೂಲಂಕಷವಾಗಿ ಅವಲೋಕಿಸಿ, ಅನುಕೂಲ ಅನಾನುಕೂಲಗಳ ಬಗ್ಗೆ ಚರ್ಚಿಸಿ ಸಂಪೂರ್ಣ ಮಾಹಿತಿ ಸಂಗ್ರಹಿಸಲಾಯಿತು.
ತಂಡವು ಬೆಳಿಗ್ಗೆ 10 ಗಂಟೆಗೆ ಸೂರಗೊಂಡನಕೊಪ್ಪ ಹಿರಿಯ ಪ್ರಾಥಮಿಕ ಶಾಲೆ, ಉರ್ದು ಶಾಲೆಗಳಿಗೆ ಭೇಟಿಕೊಡಲಾಯಿತು, ಅದಾದ ನಂತರ ಹಳೆ ಜೋಗದ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಹೊಸ ಜೋಗದ ಹಿರಿಯ ಪ್ರಾಥಮಿಕ ಶಾಲೆ & ಪ್ರೌಢ ಶಾಲೆ, ಚಿನ್ನಿಕಟ್ಟೆ ಹಿರಿಯ ಪ್ರಾಥಮಿಕ ಶಾಲೆ, ಮಾದಾಪುರದ ಹಿರಿಯ ಪ್ರಾಥಮಿಕ ಶಾಲೆ, ಕೊಡತಾಳು ಗ್ರಾಮದ ಕಿರಿಯ ಪ್ರಾಥಮಿಕ ಶಾಲೆ, ಸವಳಂಗದ ಪ್ರೌಢಶಾಲೆ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಅಧ್ಯಕ್ಷರಾದ ಜಿ.ಬಿ. ವಿನಯ್ ಕುಮಾರ್ ರವರು ತಂಡದೊಂದಿಗೆ ಭೇಟಿ ನೀಡಿ, ಶಾಲೆಯ ಸ್ಥಿತಿಗತಿಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಲಾಯಿತು. ನ್ಯಾಮತಿ ಹಾಗೂ ಹೊನ್ನಾಳಿ ತಾಲ್ಲೂಕುಗಳ ಎಲ್ಲಾ ಸರ್ಕಾರಿ ಶಾಲೆಗಳಿಗೂ ಭೇಟಿ ನೀಡುವ “ಅಭಿಯಾನ” ವು ಮುಂದುವರೆಯಲಿದೆ ಹಾಗೂ ಅದಾಲತ್ ನಿಂದ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುವಂತಾಗಬೇಕೆಂಬುದೇ ನಮ್ಮ ಧ್ಯೇಯ ಮತ್ತು ಗುರಿಯಾಗಿದೆಯೆಂದು ಜಿ. ಬಿ. ವಿನಯ್ ಕುಮಾರ್ ತಿಳಿಸಿದರು.